ಪತಂಜಲಿ ಮಹರ್ಷಿ | ಅಷ್ಟಾಂಗ ಯೋಗ | ಬ್ರಹ್ಮಋಷಿಸ್ ಹರ್ಮಿಟೇಜ್

ಪತಂಜಲಿ ಮಹರ್ಷಿ


Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis
                    Divine Soul Guru Wisdom Positive Quotes

ಪತಂಜಲಿ ಮಹರ್ಷಿ 2ನೇ ಶತಮಾನದ ಶ್ರೇಷ್ಠ ಋಷಿ. ಸರ್ಪಗಳ ದೇವರಾದ ಆದಿಶೇಷನು ಪತಂಜಲಿ ಮಹರ್ಷಿಗಳಾಗಿ ಜನ್ಮ ತಾಳಿದರು

ಪತಂಜಲಿ ಮಹರ್ಷಿಯವರು 'ಯೋಗಸೂತ್ರ' ಕ್ಕೆ ನೀಡಿರುವ ಅಗಾಧ ಕೊಡುಗೆಯಿಂದಾಗಿ ಅವರನ್ನು ಯೋಗಗಳ ಪಿತಾಮಹ ಎಂದು ಪೂಜಿಸಲಾಗುತ್ತದೆ. ಇವರು ಯೋಗ ಮತ್ತು ಧ್ಯಾನದ ಜ್ಞಾನವನ್ನು ಯೋಗಸೂತ್ರದ ಮೂಲಕ ಮೊಟ್ಟಮೊದಲಾಗಿ ತಂದವರು, ಇದನ್ನೇ ಇಂದಿನ ಕಾಲದಲ್ಲಿ ಶಾಸ್ತ್ರೀಯ ಯೋಗ ಎಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚು ಅನುವಾದಿತ ಪ್ರಾಚೀನ ಸಂಸ್ಕೃತ ಪಠ್ಯವಾಗಿದೆ. ಅವರು ‘ಯೋಗ’ ವನ್ನು ಶುದ್ಧ ಮತ್ತು ನಿಖರವಾದ ವಿಜ್ಞಾನ ಎಂದು ಸಂಶ್ಲೇಷಿಸಿದರು. ಅವರು ವ್ಯಾಕರಣ ಮತ್ತು ಔಷಧಿಗಳ ಬಗ್ಗೆ ಗ್ರಂಥಗಳನ್ನು ಕೂಡ ಬರೆದಿದ್ದಾರೆ.

ಪತಂಜಲಿ ಮಹರ್ಷಿಯವರನ್ನು 18 ಸಿದ್ಧರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಸಿದ್ಧ ತಿರುಮೂಲರ್ ಅವರ ಮೇರುಕೃತಿಯಾದ ‘ತಿರುಮಂಧಿರಾಮ್’ ಪ್ರಕಾರ, ಪತಂಜಲಿ ಮಹರ್ಷಿಯವರು ಮಹಾನ್ ಸಿದ್ದರಾದ ನಂದಿಕೇಶ್ವರರಿಂದ ಯೋಗ ಕಲಿತರು.

ಕಳೆದ ಒಂದು ದಶಕದಲ್ಲಿ, ಅಂತರ್ಜಾಲದ ವೇದಿಕೆಯಲ್ಲಿ ‘ಯೋಗ’ ಹೆಚ್ಚು ಹುಡುಕಿರುವ ವಿಷಯವಾಗಿದೆ ಮತ್ತು ಭಾರತವು ಅನೇಕ ಪ್ರವಾಸಿಗರಿಗೆ ಆಯ್ಕೆ ಮಾಡಿದ ಆಧ್ಯಾತ್ಮಿಕ ತಾಣವಾಗಿದೆ. ಯೋಗದ ಹಿಂದಿನ ವಿಜ್ಞಾನ ಮತ್ತು ಅದು ಒದಗಿಸುವ ಸ್ಪಷ್ಟತೆಯು ಅಂತಹ ಅನೇಕ ಜನರನ್ನು ಆಕರ್ಷಿಸುತ್ತದೆ.

ಯಾವುದೇ ಆಧುನಿಕ ದಿನದ ಕಾಯಿಲೆಗಳು - ದೈಹಿಕ ಮತ್ತು ಮಾನಸಿಕ ಎರಡೂ, ಯೋಗದ ಮೂಲಕ ಪರಿಹಾರಗಳನ್ನು ಹೊಂದಿವೆ. ಮಾನವ ಬೆಳವಣಿಗೆಯ ಎಲ್ಲಾ ಆಯಾಮಗಳನ್ನು ಯೋಗ ಒಳಗೊಂಡಿದೆ. ಇದರ ವ್ಯಾಪ್ತಿ ಕೇವಲ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸೀಮಿತವಾಗಿರಬೇಕಾಗಿಲ್ಲ. ಮಹಾನ್ ಋಷಿಗೆ ಗೌರವ ಸಲ್ಲಿಸುವ ಸರಿಯಾದ ಮಾರ್ಗವೆಂದರೆ ಸ್ವಯಂ ಸಾಕ್ಷಾತ್ಕಾರದ ಮೂಲಕ ಯೋಗದ ಸಾರವನ್ನು ಪೂರ್ಣವಾಗಿ ಅನುಭವಿಸುವ ಪ್ರಜ್ಞಾಪೂರ್ವಕ ಪ್ರಯತ್ನ.

ಯಾವುದೇ ಆಧುನಿಕ ದಿನದ ಕಾಯಿಲೆಗಳು - ದೈಹಿಕ ಮತ್ತು ಮಾನಸಿಕ ಎರಡೂ, ಯೋಗದ ಮೂಲಕ ಪರಿಹಾರಗಳನ್ನು ಹೊಂದಿವೆ. ಮಾನವ ಬೆಳವಣಿಗೆಯ ಎಲ್ಲಾ ಆಯಾಮಗಳನ್ನು ಯೋಗ ಒಳಗೊಂಡಿದೆ. ಇದರ ವ್ಯಾಪ್ತಿ ಕೇವಲ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸೀಮಿತವಾಗಿರಬೇಕಾಗಿಲ್ಲ. ಮಹಾನ್ ಋಷಿಗೆ ಗೌರವ ಸಲ್ಲಿಸುವ ಸರಿಯಾದ ಮಾರ್ಗವೆಂದರೆ ಸ್ವಯಂ ಸಾಕ್ಷಾತ್ಕಾರದ ಮೂಲಕ ಯೋಗದ ಸಾರವನ್ನು ಪೂರ್ಣವಾಗಿ ಅನುಭವಿಸುವ ಪ್ರಜ್ಞಾಪೂರ್ವಕ ಪ್ರಯತ್ನ.

ಅಷ್ಟಾಂಗ ಯೋಗ


ಪತಂಜಲಿ ಮಹರ್ಷಿ ತನ್ನ ಯೋಗ ಸೂತ್ರಗಳನ್ನು ನಾಲ್ಕು ಅಧ್ಯಾಯಗಳು ಅಥವಾ ಸಂಸ್ಕೃತದಲ್ಲಿ ಪಾದಗಳೆಂದು ವಿಂಗಡಿಸಿದ್ದಾರೆ. ಅವು ಸಮಾಧಿ ಪಾದ, ಸಾಧನಾ ಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದ.

ಸ್ವಯಂ ಸಾಕ್ಷಾತ್ಕಾರವನ್ನು ಸಾಧಿಸಲು ಹಂತ ಹಂತವಾಗಿ ಅಷ್ಟಾಂಗ ಯೋಗವನ್ನು ವಿವರಿಸಲಾಗಿದೆ. ಇದು ಎಂಟು ಅವಿಭಾಜ್ಯ ಅಂಶಗಳಾಗಿವೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹರ, ಧಾರಣ, ಧ್ಯಾನ ಮತ್ತು ಸಮಾಧಿ.


ಅಷ್ಟಾಂಗ ಯೋಗದ 8 ಅಂಗಗಳು

ಓದಲು ಪ್ರತಿಯೊಂದನ್ನು ಕ್ಲಿಕ್ ಮಾಡಿ

ಯಮಗಳು ಸ್ವಯಂ ಸಂಯಮದ ವಿಭಾಗಗಳಾಗಿವೆ. ಅವುಗಳನ್ನು ಪರಸ್ಪರ ಸಂಪರ್ಕ ಹೊಂದಿರುವ ಜಗತ್ತಿನಲ್ಲಿ ಮಾತ್ರ ಅಭ್ಯಾಸ ಮಾಡಬಹುದು. ಅವು ‘ಬ್ರಹ್ಮಾಂಡದ ಮಾರ್ಗಸೂಚಿಗಳು’ ಮತ್ತು ಅವುಗಳನ್ನು ಸ್ಥಳ, ಸಮಯ ಅಥವಾ ಸಂದರ್ಭಗಳಿಂದ ಸೀಮಿತಗೊಳಿಸಬಾರದು. ನಿಗದಿತ 5 ಯಮಗಳಿವೆ.

ಅಹಿಂಸೆ
ಅಹಿಂಸಾ ಅಥವಾ ಅಹಿಂಸೆ ಎಂದರೆ ಆಲೋಚನೆಯಲ್ಲಿ ಮಾತಿನಲ್ಲಿ ಮತ್ತು ಕಾರ್ಯದಲ್ಲಿ ಹಿಂಸೆ ಹೊಂದಿರಬಾರದು ತನ್ನ ಮೇಲೆ ತಾನೇ ಕಠಿಣವಾಗಿ ನಡೆದುಕೊಳ್ಳುವುದು ಕೂಡ ಒಳಗೊಂಡಿರುತ್ತದೆ.

ಸತ್ಯ
ಸತ್ಯ ಅಥವಾ ಸತ್ಯತೆಯು ಎಲ್ಲಾ ಸಮಯದಲ್ಲೂ, ಎಲ್ಲಾ ಜೀವನದ ಸಂದರ್ಭಗಳಲ್ಲಿಯೂ ಸತ್ಯವಾಗಿರುವುದು. ಇದು ಎಲ್ಲಾ ಸುಳ್ಳುಗಳನ್ನು ದೂರವಿಡುತ್ತಿದೆ.

ಅಸ್ತೇಯ
ಅಸ್ತೇಯ ಅಥವಾ ಕದಿಯದಿರುವುದು ಎಲ್ಲಾ ರೀತಿಯ ಕಳ್ಳತನದಿಂದ ತನ್ನನ್ನು ತಾನೇ ನಿರ್ಬಂಧಿಸಿಕೊಳ್ಳುವುದು - ವಸ್ತುಗಳು, ಸಂಬಂಧಗಳು, ಜ್ಞಾನ, ಆಲೋಚನೆಗಳು ಇತ್ಯಾದಿ.

ಬ್ರಹ್ಮಚರ್ಯ
ಬ್ರಹ್ಮಚಾರ್ಯರು ಎಲ್ಲಾ ಸಮಯದಲ್ಲೂ ದೇವರನ್ನು ಅರ್ಥ ಮಾಡಿಕೊಂಡು, ಹೊಂದಿಕೊಂಡು ನಡೆಯುವನು. ಇದು ಪರಿಶುದ್ಧತೆ ಅಥವಾ ಲೈಂಗಿಕ ಸಂಯಮವನ್ನು ಸಹ ಕಾಪಾಡುತ್ತದೆ.

ಅಪರಿಗ್ರಹ
ಅಪರಿಗ್ರಹ ಎಂದರೆ ಅತ್ಯಧಿಕವಾಗಿ ಸಂಗ್ರಹಿಸದಿರುವ, ಒಡೆತನ ಸಾಧಿಸದಿರುವ ಮತ್ತು ದುರಾಶೆಯಿಂದ ದೂರವಿರುವ ಸ್ಥಿತಿ.

ನಿಯಮಗಳು ‘ವೈಯಕ್ತಿಕ ಮಾರ್ಗಸೂಚಿಗಳು’. ನಿಗದಿತ 5 ನಿಯಮಗಳಿವೆ.

ಸ್ವಚ್ಛ
ಶೌಚಾ ಅಥವಾ ಸ್ವಚ್ಛತೆ ಆಂತರಿಕ ಮತ್ತು ಬಾಹ್ಯ ಶುದ್ಧತೆಯನ್ನು ಸೂಚಿಸುತ್ತದೆ. ಬಾಹ್ಯ ಪರಿಶುದ್ಧತೆಯು ನಮ್ಮ ದೇಹ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಆಂತರಿಕ ಶುದ್ಧತೆಯು ಆಲೋಚನೆಗಳು ಮತ್ತು ಭಾವನೆಗಳನ್ನು ಶುದ್ಧವಾಗಿರಿಸುವುದು.

ಸಂತೋಷ
ಸಂತೃಪ್ತಿ ಅಥವಾ ಶಾಂತಿಯುತ ಮನಸ್ಸಿನಿಂದ ಉಂಟಾಗುವ ಆನಂದ ಅಥವಾ ಉಲ್ಲಾಸವೇ ಸಂತೋಷ

ತಪಸ್ಸು
ತಪಸ್ಸು ಎಂದರೆ ತೀವ್ರವಾದ ಧ್ಯಾನ. ತಪಸ್ಸು ಬಾಹ್ಯ ಮತ್ತು ಆಂತರಿಕ ಎರಡೂ ಆಗಿರಬಹುದು. ಭೌತಿಕ ಕಠಿಣತೆಗಳೊಂದಿಗೆ ಇಂದ್ರಿಯಗಳನ್ನು ನಿಯಂತ್ರಿಸುವುದು ಬಾಹ್ಯ ತಪಸ್ಸು. ಅವ್ಯವಸ್ಥೆ, ಪರಿಶ್ರಮ, ತ್ಯಾಗಗಳ ಮಧ್ಯೆ ಶಾಂತವಾಗಿರುವುದು ಆಂತರಿಕ ತಪಸ್ಸು. ದೈಹಿಕ ಮತ್ತು ಮಾನಸಿಕ ಸಹಿಷ್ಣುತೆಗಳು ಪರಸ್ಪರ ಸಹಾಯ ಮಾಡುತ್ತವೆ.

ಸ್ವಅಧ್ಯಾಯ
ಸ್ವಅಧ್ಯಾಯ ಎಂದರೆ ಸ್ವಯಂ ಅಧ್ಯಯನ. ಇದು ಪವಿತ್ರ ಗ್ರಂಥಗಳ ಅಧ್ಯಯನ ಮಾತ್ರವಲ್ಲ, ಅವರ ಸ್ವಂತ ನಡವಳಿಕೆಯನ್ನು ಮತ್ತು ಮನಸ್ಸಿನ ಮನೋವೈಜ್ಞಾನಿಕತೆಯನ್ನು ನಿರಂತರವಾಗಿ ಗಮನಿಸುವುದು ಒಳಗೊಂಡಿರುತ್ತದೆ.

ಈಶ್ವರ ಪ್ರಣಿಧಾನ
ಈಶ್ವರ ಪ್ರಣಿಧಾನ ಎಂದರೆ ದೇವರು, ಋಷಿಗಳು ಅಥವಾ ಗುರುಗಳಿಗೆ ಸಂಪೂರ್ಣವಾಗಿ ಶರಣಾಗುವುದು. ನಾವು ಮಾಡುವ ಕಾರ್ಯಗಳಿಗೆ ಸಿಗುವ ಯಾವುದೇ ಫಲಿತಾಂಶಗಳು ನಮಗೆ ಸಿಕ್ಕಿರುವ ಆಶೀರ್ವಾದ ಎಂದು ಸ್ವೀಕರಿಸುವುದು ಕೂಡ ಆಗುತ್ತದೆ

ಆಸನಾ ಎಂದರೆ ದೃಢವಾದ ಮತ್ತು ಆರಾಮದಾಯಕವಾದ ಆಸನ.

ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದಕ್ಕೆ ಆಸನವು ಅತ್ಯಗತ್ಯ. ದೃಢವಾದ ಧ್ಯಾನದ ಭಂಗಿ ಇಲ್ಲದೆ, ದೇಹದ ಸ್ಥಿರತೆಯನ್ನು ಸಾಧಿಸಲು ಸಾಧ್ಯವಿಲ್ಲ ಮತ್ತು ಈ ಸ್ಥಿರತೆ ಇಲ್ಲದೆ ಏಕಾಗ್ರತೆ ಮತ್ತು ಮನಸ್ಸಿನ ಸಂಯಮ ಸಾಧ್ಯವಿಲ್ಲ.

ಯೋಗಾಸನಗಳು ಅರಿವು ಮತ್ತು ವ್ಯವಸ್ಥಿತ ಉಸಿರಾಟದಿಂದ ಕೂಡಿದ ದೈಹಿಕ ವ್ಯಾಯಾಮಗಳು. ಅದು ದೇಹವನ್ನು ಸದೃಢವಾಗಿ ಮತ್ತು ಪೂರಕವಾಗಿ ಇಡುತ್ತದೆ.

ಪ್ರಾಣವು ಈ ಬ್ರಹ್ಮಾಂಡದ ಸೂಕ್ಷ್ಮ ಶಕ್ತಿಯಾಗಿದ್ದು ಅದು ಇಡೀ ವಿಶ್ವದಲ್ಲಿ ಹರಡಿರುತ್ತದೆ. ಉಸಿರಾಡುವಾಗ ನಾವು ನಮ್ಮ ಸೂರ್ಯನಿಂದ ಪ್ರಾಣವನ್ನು ಪಡೆಯುತ್ತೇವೆ. ಉಸಿರಾಟವು ನಾವು ಜೀವಂತವಾಗಿರುವುದಕ್ಕೆ ಮೂಲ ಮತ್ತು ಮುಖ್ಯ ಪುರಾವೆ. ಪ್ರಾಣಾಯಾಮ ಎಂದರೆ ನಮ್ಮ ಉಸಿರಾಟ ಮತ್ತು ಅದರ ಮಾದರಿಯನ್ನು ನಿಯಂತ್ರಿಸುವ ಅಭ್ಯಾಸ.

ಪ್ರಾಣಾಯಾಮದ ಸಮಯದಲ್ಲಿ, ಸೂಕ್ಷ್ಮ ಪ್ರಾಣವು ನಮ್ಮ ಕೋಶಗಳಿಗೆ ಪ್ರವೇಶಿಸುತ್ತದೆ ಮತ್ತು ನಮ್ಮ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ.

ಪ್ರಾಣಾಯಾಮವು ಹೆಚ್ಚಿನ ಪ್ರಾಣವನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತದೆ. ಪ್ರಾಣಾಯಾಮವು ಉಸಿರನ್ನು ಒಳಗೆ ತೆಗೆದುಕೊಳ್ಳುವುದು, ಉಸಿರನ್ನು ಹೊರಗೆ ಬಿಡುವುದು ಮತ್ತು ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಒಳಗೊಂಡಿರುತ್ತದೆ. ಉಸಿರನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ, ಎದೆಯು ಕಾಂತಕ್ಷೇತ್ರವಾಗಿ ಕಾರ್ಯನಿರ್ವಹಿಸುತ್ತದೆ, ವೃತ್ತಾಕಾರದಲ್ಲಿ ತಿರುಗುತ್ತದೆ ಮತ್ತು ಒಳಗೆ ತೆಗೆದುಕೊಂಡ ಶಕ್ತಿಯನ್ನು ಶ್ವಾಸಕೋಶಕ್ಕೆ ರವಾನಿಸುತ್ತದೆ ಅದು ಶಕ್ತಿ ಉತ್ಪಾದಕಗಳಾಗಿ ಕಾರ್ಯನಿರ್ವಹಿಸುತ್ತದೆ. ಈ ಉತ್ಪತ್ತಿಯಾದ ಶಕ್ತಿಗಳನ್ನು ನಮ್ಮ ಚಕ್ರಗಳಲ್ಲಿ ಸಂಗ್ರಹಿಸಲಾಗುತ್ತದೆ. ಚಕ್ರಗಳು ದೇಹದ ಎಲ್ಲಾ ಭಾಗಗಳಿಗೆ ಶಕ್ತಿಯನ್ನು ವಿತರಿಸುವ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತವೆ. ಈ ಪ್ರಕ್ರಿಯೆಯು ನಮಗೆ ಹಲವು ವರ್ಷಗಳ ಕಾಲ ಬದುಕಲು ಸಹಾಯ ಮಾಡುತ್ತದೆ.

ಆಸನವು ಭೌತಿಕ ದೇಹಕ್ಕೆ ಇದ್ದರೆ, ಪ್ರಾಣಾಯಮವು ಸೂಕ್ಷ್ಮ ದೇಹಕ್ಕೆ. ಪ್ರಾಣಾಯಮವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ನಾಡಿ ವ್ಯವಸ್ಥೆ ಮತ್ತು ಪಂಚಕೋಶಗಳನ್ನು ಬಲಪಡಿಸುತ್ತದೆ. ಇದು ಸ್ಥಿರತೆಯನ್ನು ತರಲು ಸಹಾಯ ಮಾಡುತ್ತದೆ ಮತ್ತು ಧ್ಯಾನದ ಸಮಯದಲ್ಲಿ ಆಲೋಚನೆಗಳ/ಆಲೋಚನೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಪ್ರತ್ಯಾಹಾರವು ಇಂದ್ರಿಯಗಳನ್ನು ಮತ್ತು ಮನಸ್ಸನ್ನು ಬಾಹ್ಯ ವಸ್ತುಗಳಿಂದ ಹಿಂತೆಗೆದುಕೊಳ್ಳುತ್ತದೆ. ಇದು ಪ್ರಜ್ಞಾಪೂರ್ವಕವಾಗಿ ಒಬ್ಬರ ಮನಸ್ಸಿನ ಪ್ರಕ್ರಿಯೆಗಳನ್ನು ಇಂದ್ರಿಯಗಳಿಗೆ ಸಂಬಂಧಪಟ್ಟ ಜಗತ್ತಿನಿಂದ ಮುಚ್ಚಿಕೊಳ್ಳುವುದು. ಪ್ರತ್ಯಾಹಾರವು ಬಾಹ್ಯಪ್ರಪಂಚವು ನಿಮ್ಮನ್ನು ನಿಯಂತ್ರಿಸುವುದನ್ನು ತಡೆಯಲು ಒಬ್ಬರಿಗೆ ಶಕ್ತಿಯನ್ನು ನೀಡುತ್ತದೆ.

ಪ್ರತ್ಯಾಹಾರ ಬುದ್ಧಿಶಕ್ತಿಯಿಂದ ಪ್ರಾರಂಭವಾಗುತ್ತದೆ.

ಧಾರಣವು ಬಾಹ್ಯ ಅಥವಾ ಆಂತರಿಕ ರೂಪ ಅಥವಾ ವಸ್ತುವಿಗೆ ಮನಸನ್ನು ಕೇಂದ್ರೀಕರಿಸುವುದು. ಇದು ಒಬ್ಬರ ಮನಸ್ಸಿನಲ್ಲಿ ಒಂದೇ ಪರಿಕಲ್ಪನೆ ಅಥವಾ ಕಲ್ಪನೆಯನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಅದು ಮನಸ್ಸನ್ನು ತನ್ನ ಮೇಲೆಯೇ ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.

ಉಸಿರಾಟವನ್ನು ಗಮನಿಸುವುದು, ಮಂತ್ರಗಳನ್ನು ಪಠಿಸುವುದು, ಚಿತ್ರ ಅಥವಾ ವಸ್ತುವಿನ ಅಥವಾ ಬೆಳಕಿನ ಕಲ್ಪನೆ ಮಾಡಿಕೊಳ್ಳುವುದು ಇತ್ಯಾದಿ ಧಾರಣೆಯ ವಿವಿಧ ವಿಧಾನಗಳು.

ಧ್ಯಾನ ಅಥವಾ ಮೆಡಿಟೇಶನ್ ಉದ್ದೇಶ, ದೇಹ, ಮನಸ್ಸು ಮತ್ತು ಬುದ್ಧಿಯನ್ನು ಮೌನ ಗೊಳಿಸುವುದು. ಇದರ ಪಲಿತಾಂಶ ದೇಹದ ಸ್ಥಿರತೆ, ಏಕಾಗ್ರತೆ ಮತ್ತು ಕಲ್ಪನಾಶಕ್ತಿ.

ನಾವು ಧ್ಯಾನದಲ್ಲಿ ಮುಂದುವರಿಯುತ್ತಿದ್ದಂತೆ, ನಾವು ಮಾನಸಿಕ ಸ್ಥಿರತೆಯನ್ನು ಸ್ಥಾಪಿಸುತ್ತೇವೆ, ನಮ್ಮ ಅರಿವು ವಿಸ್ತರಿಸುತ್ತದೆ ಮತ್ತು ನಾವು ಬೆಳಕನ್ನು ಅನುಭವಿಸಲು ಪ್ರಾರಂಭಿಸುತ್ತೇವೆ.

ಸಮಾಧಿಯು ಪರಿಣಾಮಕಾರಿಯಾಗಿ ಮಾಡಿದ ಧ್ಯಾನದ ಫಲಿತಾಂಶವಾಗಿದೆ.

ಇದು ಸಂಪೂರ್ಣ ಏಕತೆ. ಇದು ಧ್ಯಾನ ಮಾಡುವವರಿಗೂ ಮತ್ತು ಧ್ಯಾನದ ಕ್ರಿಯೆಯ ನಡುವೆ ಯಾವುದೇ ವ್ಯತ್ಯಾಸವಿಲ್ಲದ ಚಿಂತನೆಯಿಲ್ಲದ ಸ್ಥಿತಿ.

ಸಮಾಧಿಯಲ್ಲಿ ನಾವು ದೇಹ, ಸಮಯ ಮತ್ತು ಸ್ಥಳವನ್ನು ಮೀರಿ ಹೋಗುತ್ತೇವೆ ಮತ್ತು ನಾವು ಬೆಳಕಾಗಿ ಬಿಡುತ್ತೇವೆ.