ಮಾಯೆ | ಗುಣಗಳು | ಏಕತೆ | ಬ್ರಹ್ಮಋಷಿಸ್ ಹರ್ಮಿಟೇಜ್

ಮಾಯೆ


Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis
                    Divine Soul Guru Wisdom Positive Quotes

ಮಾಯೆ ಎಂಬುದು ಇಡೀ ಸೃಷ್ಟಿಯಲ್ಲಿ ವ್ಯಾಪಿಸಿರುವ ವಸ್ತು ಅಥವಾ ದ್ರವ್ಯ.

ಆತ್ಮವು ಮನಸ್ಸನ್ನು ಸಾಧನವಾಗಿ ಬಳಸಿಕೊಂಡು ಮಾಯೆಯ ಮೂಲಕ ನೋಡಿದಾಗ, ಜಗತ್ತು ಪ್ರಕ್ಷೇಪಿಸುತ್ತದೆ ಮತ್ತು ಕಾಣುತ್ತದೆ. ಪ್ರೊಜೆಕ್ಟರ್ ಮೂಲಕ ಹೇಗೆ ಚಲನಚಿತ್ರವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆಯೋ ಹಾಗೆಯೇ ಮನಸ್ಸನ್ನು ಬಳಸಿಕೊಂಡು ಜಗತ್ತನ್ನು ನಮಗೆ ಪ್ರಕ್ಷೇಪಿಸಲಾಗುತ್ತದೆ.

ಮಾಯೆ ಮುಸುಕಿನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಬೆಳಕಿನ ಆಧಾರವಾಗಿರುವ ವಾಸ್ತವವನ್ನು ಮರೆಮಾಡುತ್ತದೆ.

ಸೃಷ್ಟಿಯಲ್ಲಿ ವೈವಿಧ್ಯತೆಯನ್ನು ಉಂಟುಮಾಡುವುದು ಮಾಯೆಯ ಉದ್ದೇಶ. ಆದ್ದರಿಂದ ಇದು ಇಲ್ಲದೆ ಎಲ್ಲಾ ಬೆಳಕಾಗಿ ಗೋಚರಿಸುತ್ತದೆ ಮತ್ತು ಯಾವುದೇ ವೈವಿಧ್ಯತೆ ಸಾಧ್ಯವಿಲ್ಲ.

ಮಾಯೆ ಅಥವಾ ಪ್ರಪಂಚವು ಗ್ರಹಿಸಿದ ವಾಸ್ತವ ಮತ್ತು ಸಮಯಕ್ಕೆ ಬದ್ಧವಾಗಿದೆ, ಆದರೆ ಬೆಳಕು ಸಂಪೂರ್ಣ ವಾಸ್ತವ ಮತ್ತು ಸಮಯರಹಿತವಾಗಿರುತ್ತದೆ.

ಮಾಯೆ ಸೃಷ್ಟಿ, ಪೋಷಣೆ ಮತ್ತು ವಿನಾಶದ ಮೂಲಕ ಬದಲಾವಣೆಗೆ ಒಳಗಾಗುತ್ತದೆ, ಆದರೆ ಬೆಳಕು ಶಾಶ್ವತ ಮತ್ತು ಬದಲಾಗದ ವಾಸ್ತವ.

ಸ್ವಯಂ-ಸಾಕ್ಷಾತ್ಕಾರಕ್ಕೆ ಮೊದಲು, ಮಾಯೆ ಮಾತ್ರ ಕಂಡುಬರುತ್ತದೆ ಮತ್ತು ಬೆಳಕು ಕಾಲ್ಪನಿಕ ಎಂದು ಅನಿಸುತ್ತದೆ. ಒಮ್ಮೆ ಸಾಕ್ಷಾತ್ಕಾರ ಆದಾಗ ಮತ್ತು ಬೆಳಕನ್ನು ನೋಡಿದಾಗ, ಮಾಯೆ ಕಾಲ್ಪನಿಕವಾಗಿ ಬಿಡುತ್ತದೆ. ಆದ್ದರಿಂದ ಸಾಕ್ಷಾತ್ಕಾರ ಪಡೆದಂತವರು ಮಾಯೆಯು ಒಂದು ಭ್ರಮೆ ಎಂದು ಕರೆಯುತ್ತಾರೆ.

ಗುಣಗಳು


Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis
                    Divine Soul Guru Wisdom Positive Quotes

ಗುಣಗಳು ಅಥವಾ ತ್ರಿಗುಣಗಳು, ಮಾಯೆಯ ಮೂರು ವಿಭಿನ್ನ ಗುಣಗಳನ್ನು ಒಳಗೊಂಡಿದೆ. ಅವುಗಳನ್ನು ಸತ್ವ - ರಜಸ - ತಮಸ ಎಂದು ಕರೆಯಲಾಗುತ್ತದೆ

ಈ ಮೂರು ಗುಣಗಳು ಪ್ರತಿಯೊಬ್ಬರಲ್ಲೂ ಮತ್ತು ಇಡೀ ಸೃಷ್ಟಿಯ ಎಲ್ಲದರಲ್ಲೂ ವಿಭಿನ್ನ ಸಂಯೋಜನೆ ಮತ್ತು ಸರಿಯಾದ ಪ್ರಮಾಣಗಳಲ್ಲಿ ಇರುತ್ತದೆ.

ವೈವಿಧ್ಯಮಯ ಪ್ರಮಾಣದಲ್ಲಿ ಗುಣಗಳ ಈ ಸಂಯೋಜನೆಯು ವೈವಿಧ್ಯತೆಗೆ ಕಾರಣವಾಗುತ್ತದೆ. ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳ ವಿಭಿನ್ನ ಪ್ರಮಾಣಗಳು ಮತ್ತು ಸಂಯೋಜನೆಗಳಲ್ಲಿನ ಮಿಶ್ರಣವು ಅಸಂಖ್ಯಾತ ಇತರ ಬಣ್ಣಗಳಿಗೆ ಹೇಗೆ ಕಾರಣವಾಗಿದೆಯೋ ಹಾಗೆ.

ಸತ್ವ ಎಂಬುದು ಜ್ಞಾನ, ಸಮತೋಲನ, ಸಾಮರಸ್ಯ, ಪರಿಶುದ್ಧತೆ, ಸೃಜನಶೀಲತೆ, ಸಕಾರಾತ್ಮಕತೆ, ಶಾಂತಿಯುತತೆ ಮತ್ತು ಸದ್ಗುಣ.

ರಜಸ್ ಎಂದರೆ ಉತ್ಸಾಹ, ಚಟುವಟಿಕೆ ಮತ್ತು ಸ್ವಕೇಂದ್ರಿಕತೆ.

ತಮಸ್ ಎಂದರೆ ಅಸಮತೋಲನ, ಅಸ್ವಸ್ಥತೆ, ಆತಂಕ, ಮಂದ, ಆಲಸ್ಯ, ಹಿಂಸೆ, ಅಜ್ಞಾನ, ಮುಂದೂಡುವಿಕೆ ಮತ್ತು ಉದಾಸೀನತೆಯ ಗುಣ.

ಈ ಮೂರು ಗುಣಗಳ ಸಂಯೋಜನೆಯ ಒಟ್ಟು ಫಲಿತಾಂಶದಿಂದ ಆಗುವ ಪರಿಣಾಮದಿಂದ, ಒಬ್ಬ ವ್ಯಕ್ತಿಯ ಅಥವಾ ವಸ್ತುವಿನ ಗುಣವನ್ನು ನೋಡಲಾಗುತ್ತದೆ. ಆದ್ದರಿಂದ ಗುಣಗಳು ನಮ್ಮ ನಡವಳಿಕೆ ಮತ್ತು ನಂತರದ ಜೀವನ ಸನ್ನಿವೇಶಗಳಲ್ಲಿ ಪ್ರಮುಖ ಅಂಶವಾಗಿದೆ.

ಬೆಳಕು ಮಾಯೆಯಿಂದ ಪ್ರಭಾವಿತವಾಗದ ಕಾರಣ, ಇದನ್ನು ನಿರ್ಗುಣ ಎಂದು ಕರೆಯಲಾಗುತ್ತದೆ ಅಂದರೆ ಗುಣವಿಲ್ಲದ ಸ್ಥಿತಿ.

ಏಕತೆ


Brahmarishis Hermitage Devatmananda Shamballa Rishis Siddhas Siddhar Sprituality Kalki Saptharishis Saptarishis
                    Divine Soul Guru Wisdom Positive Quotes

ಏಕತೆ ಎಂದರೆ ವಿಶ್ವದಲ್ಲಿ ಇರುವ ಎಲ್ಲದರ ನಡುವಿನ ಸಂಪರ್ಕ. ಇದು ಆತ್ಮದಿಂದ ಆತ್ಮಕ್ಕೆ, ಹೃದಯದಿಂದ ಹೃದಯಕ್ಕೆಇರುವ ಸಂಪರ್ಕ.

ಸೃಷ್ಟಿಯ ವೈವಿದ್ಯತೆಯಲ್ಲಿರುವ ಬೆಳಕನ್ನು ನೋಡುವುದೇ ಏಕತೆ

ಜೀವ ಮತ್ತು ನಿರ್ಜೀವ ಎಲ್ಲವೂ ಒಂದೇ ಬೆಳಕಿನಿಂದ ಬಂದಿದೆ ಎಂದು ಅರಿಯುವುದೇ ಏಕತೆ.

ಏಕತೆಯಲ್ಲಿ ನಾವು ಮಾಯೆಯನ್ನು ಮೀರಿ ಹೋಗುತ್ತೇವೆ.

ಏಕತೆ ವೈವಿಧ್ಯತೆಯಲ್ಲಿ ಏಕತೆಯನ್ನು ತರುತ್ತದೆ.

ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ - ಎಲ್ಲಾ ಹಂತಗಳಲ್ಲಿ ಏಕತೆಯು ನಮ್ಮ ಸಾಧನೆಯೊಂದಿಗೆ ಹೊಂದಿಕೊಳ್ಳುತ್ತದೆ. ಈ ಏಕತೆಯು ಯೋಗಕ್ಕೆ ಕಾರಣವಾಗುತ್ತದೆ.